ಸ್ವಾತಿ ಚತುರ್ವೇದಿ ಒಬ್ಬ ಭಾರತೀಯ ಪತ್ರಕರ್ತೆ. [5] ಅವರು ದಿ ಸ್ಟೇಟ್ಸ್‌ಮನ್, ದಿ ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್ ಟೈಮ್ಸ್, ದಿ ಟ್ರಿಬ್ಯೂನ್, ಎನ್‌ಡಿಟಿವಿ, ಡೈಲಿಓ, ದಿ ವೈರ್ , ಗಲ್ಫ್ ನ್ಯೂಸ್ ಮತ್ತು ಡೆಕ್ಕನ್ ಹೆರಾಲ್ಡ್‌ನಂತಹ ವಿವಿಧ ಭಾರತೀಯ ಪತ್ರಿಕೆಗಳು ಮತ್ತು ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ; ಅವರ ಮೊದಲ ಪುಸ್ತಕ ಡ್ಯಾಡಿಸ್ ಗರ್ಲ್ ; ಅವರ ಎರಡನೇ ಪುಸ್ತಕದ ಶೀರ್ಷಿಕೆ ಐ ಆಮ್ ಎ ಟ್ರೋಲ್: ಇನ್ಸೈಡ್ ದಿ ಸೀಕ್ರೆಟ್ ವರ್ಲ್ಡ್ ಆಫ್ ದಿ ಬಿಜೆಪೀಸ್ ಡಿಜಿಟಲ್ ಆರ್ಮಿ . ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಅವರು ಪ್ರತಿಕೂಲ ವಾತಾವರಣದಲ್ಲಿ ಪತ್ರಿಕೋದ್ಯಮ ನಡೆಸುವುದಕ್ಕಾಗಿ ನೀಡುವ ಧೈರ್ಯ ಪ್ರಶಸ್ತಿಯನ್ನು ಸ್ವಾತಿ ಚತುರ್ವೇದಿ ಅವರು ೨೦೧೮ ರಲ್ಲಿ ಪಡೆದಿದ್ದಾರೆ. == ಸಹ ನೋಡಿ == ಬರ್ಖಾ ದತ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಎನ್‌ಡಿಟಿವಿಯ ಜಾಲತಾಣದಲ್ಲಿ ಸ್ವಾತಿ ಚತುರ್ವೇದಿ ಬಗ್ಗೆ